ಅದಿತಿ ಶರ್ಮಾ ಒಬ್ಬ ಭಾರತೀಯ ದೂರದರ್ಶನ ಮತ್ತು ಚಲನಚಿತ್ರ ನಟಿ ಮತ್ತು . ಇವರು ಅಂಡ್ ಟಿವಿಯ ಗಂಗಾ ಧಾರವಾಹಿಯಲ್ಲಿ ಗಂಗಾ ಶುಕ್ಲಾ ಹಾಗೂ ಕಲರ್ಸ್ ಟಿವಿಯ ಸಿಲ್ಸಿಲಾ ಬದಲ್ತೇ ರಿಶ್ತೋಂ ಕಾ ಧಾರವಾಹಿಯಲ್ಲಿ ಮೌಲಿ ಪಾತ್ರವಹಿಸಿ ನಟಿಸಿದಕ್ಕೆ ಹೆಸರುವಾಸಿಯಾಗಿದ್ದಾರೆ . == ವೃತ್ತಿ == ೨೦೦೪ ರಲ್ಲಿ ಝೀ ಟಿವಿಯಲ್ಲಿ ಪ್ರಥಮ ಪ್ರದರ್ಶನಗೊಂಡ ಇಂಡಿಯಾಸ್ ಬೆಸ್ಟ್ ಸಿನೆಸ್ಟಾರ್ಸ್ ಕಿ ಖೋಜ್ ಎಂಬ ಪ್ರತಿಭಾ ಕಾರ್ಯಕ್ರಮದ ವಿಜೇತರಾಗಿದ್ದರು. ಟಾಟಾ ಸ್ಕೈ, ಡೊಮಿನೊಸ್ ಪಿಜ್ಜಾ, ಕೋಲ್ಗೇಟ್, ಫೇರ್ ಅಂಡ್ ಲವ್ಲಿ, ಪ್ಯಾರಾಚೂಟ್ ಆಯಿಲ್, ಬ್ಯಾಂಕ್ ಆಫ್ ಇಂಡಿಯಾ, ಸ್ಟೇಫ್ರೀ, ತನೀಶ್ಕ್, ಮೂವ್, ಡಾಬರ್ ಹನಿ , ತಾಜಾ ಟೀ, ಬ್ರಿಟಾನಿಯಾ, ರಿಲಯನ್ಸ್ ಮತ್ತು ಟಾಟಾ ವೆಂಚರ್ ಮುಂತಾದ ವಿವಿಧ ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ೨೦೧೫ ರಿಂದ ೨೦೧೭ ರವರೆಗೆ ಶರ್ಮಾ ಇವರು ಅಂಡ್ ಟಿವಿಯ ಗಂಗಾ ಗಂಗಾ ಶುಕ್ಲಾ ಪಾತ್ರವನ್ನು ನಿರ್ಮಹಿಸಿದರು . ೨೦೧೮ ರಿಂದ ೨೦೧೯ ರವರೆಗೆ, ಅವರು ಕಲರ್ಸ್ ಟಿವಿಯ ಸಿಲ್ಸಿಲಾ ಬದಲ್ತೇ ರಿಶ್ತೋನ್ ಕಾ ಧಾರವಾಹಿಯಲ್ಲಿ ಶಕ್ತಿ ಅರೋರಾ ಮತ್ತು ದೃಷ್ಟಿ ಧಾಮಿಯ ಜೊತೆ ಮೌಲಿ ಪಾತ್ರದಲ್ಲಿ ನಟಿಸಿದ್ದಾರೆ. == ವೈಯಕ್ತಿಕ ಜೀವನ == ಅದಿತಿ ಶರ್ಮಾ ೧೯೮೩ರ ಆಗಸ್ಟ್ ೨೪ ರಂದು ಲಕ್ನೌದಲ್ಲಿ ಡಾ.ದೇವಿಂದರ್ ದೇವ್ ಶರ್ಮಾ ಮತ್ತು ಅನಿಲಾ ಶರ್ಮಾ ದಂಪತಿಗೆ ಜನಿಸಿದರು. ಅವರಿಗೆ ಒಬ್ಬ ಸಹೋದರಿ, ಶ್ವೇತಾ ಶರ್ಮಾ ಮತ್ತು ಒಬ್ಬ ಸಹೋದರ ಭಾವ್ಯಾ ಶರ್ಮಾ ಇದ್ದಾರೆ. ಇವರು ದೆಹಲಿ ವಿಶ್ವವಿದ್ಯಾಲಯದ ಲಕ್ನೌದ ಶ್ರೀ ವೆಂಕಟೇಶ್ವರ ಕಾಲೇಜಿನಲ್ಲಿ ಬಿ.ಕಾಂ ಅಧ್ಯಯನ ಮುಗಿಸಿದರು. ಸರ್ವಾರ್ ಅಹುಜಾ ಅವರನ್ನು ೩೦ ನವೆಂಬರ್ ೨೦೧೪ ರಂದು ವಿವಾಹವಾದರು. ಅವರನ್ನು ೨೦೦೪ ಝೀ ಸಿನಿ ಸ್ಟಾರ್ಸ್ ಕಿ ಖೋಜ್ ಪ್ರದರ್ಶನ ೨೦೦೪ ರಲ್ಲಿ ಭೇಟಿಯಾದರು ಮತ್ತು ಅವರಿಬ್ಬರೂ ಒಟ್ಟಾಗಿ ಪ್ರದರ್ಶನವನ್ನು ಗೆದ್ದರು. == ಫಿಲ್ಮೋಗ್ರಾಫಿ == === ಸಿನಿಮಾಗಳು === == ಉಲ್ಲೇಖಗಳು ==